Friday, July 24, 2015

ದೂರ ಸರಿದರು

                                                                                        

                    
ಸಪ್ತಪದಿಯ ಪ್ರಮಾಣಗಳನ್ನು ಸ್ವೀಕರಿಸಿದ್ದರೂ,
 ದೂರ ಸರಿದರು.

ಪಿಸು ಮಾತುಗಳ ಸ್ಸಂಭಾಷಣೆ ಇದ್ದರೂ,
ದೂರ ಸರಿದರು.

ಮೈಲಿ ದೂರ ಜೊತೆ ಜೊತೆ ನಡೆದಿದ್ದರೂ
ಆದರೂ ದೂರ ಸರಿದರು.

ಮುಕ್ತಾಯ ಗೀತೆ ಹಾಡಿತು ಮೂರು ಗಂಟಿನ ಬಂಧನದಲ್ಲಿ
ನೂರೆಂಟು ಕನಸಿನ ಮಹಲಗಳು.

ಒಬ್ಬರನೊಬ್ಬರು ಪ್ರೀತಿಸುತ್ತಿದ್ದರೂ ,
ಅಂತರಂಗ ಸತ್ಯ ಅರಿತ್ತಿದ್ದರೂ,
ದೂರ ಸರಿದರು.

ಹುಚ್ಚು ದೇಹದ ಕಾಮನೆ, ಪ್ರೇಮಕ್ಕಿಂತ
ದೊಡ್ಡದೆಂದು ತಿಳಿದಿದ್ದರೂ,
ದೂರ ಸರಿದರು.

ಕೊಚ್ಚಿ ಹೋಯ್ತು ..... ,
ಅವರಿಬ್ಬರ ಸ್ವಾರ್ಥದಲ್ಲಿ
ದೂ.. ಸರಿದರೂ

Kraurya (Cruelty, Savageness)

ಕ್ರೌರ್ಯ ದೇಹಕ್ಕೆ ಬಂದ ಹಸಿವು, ಮನಸ್ಸಿನ ದಹಾ ತಿಳಿಯಲ್ಲೊಲ್ಲದು ಪ್ರಶ್ನಾರ್ಥಕ ಚಿನ್ಹೆಗಳ ಕಿರೀತ ಹೊತ್ತ ಈ ಕ್ರೌರ್ಯಕ್ಕೆ ಪುರ್ಣವಿರಾಮವೆಲ್ಲಿ? ಮುದುಡುವ ಎಲೆ ಮನಸ್ಸಿನ ಅಳುವಿಗೆ "ಓ " ಕೊಡಲಾಗದ ಈ ಕ್ರೌರ್ಯ ಬಾಯಿಯ ಆಕ್ರಂದಿತ ರಕ್ತ ಕಣ್ಣಿರಿನ ಹೊಳೆಗೆ ದಿವ್ವಿಜಯದ ನಗೆ ಬಿತ್ತರಿಸುತ್ತಿದೆ "ಅಮ್ಮ ನೋವು" ಎಂದಾಗ ಗಹಗಹಿಸಿ ನಗುವ ಕ್ರೌರ್ಯ ದಿನಕ್ಕೊಂದು ಶತದಿನೋತ್ಸವ ವಿಜೃಂಭಣೆಯಿಂದ ನಡೆಸುತ್ತಿದೆ ಕ್ರೌರ್ಯ